Skip to content

ಅಗೋಚರ ದೈಹಿಕ ನೋವಿನ ಸಮಸ್ಯೆ

index1ಅಗೋಚರ (ಸೋಮ್ಯಾಟೋಫಾರ್ಮ್) ದೈಹಿಕ ನೋವಿನ ಸಮಸ್ಯೆ ಎಂದರೇನು?

ಅಗೋಚರ (ಸೋಮ್ಯಾಟೋಫಾರ್ಮ್) ದೈಹಿಕ ನೋವಿನ ಸಮಸ್ಯೆ ಎಂದರೆ ನೋವಿನ ಲಕ್ಷಣಗಳು ಕಂಡು ಬಂದು ಅವು ಸಾಮಾನ್ಯ ಚಿಕಿತ್ಸೆಯ ಮೂಲಕ ನಿವಾರಣೆಯಾಗುವಂತೆ ತೋರಿದರೂ, ಆ ನೋವಿನ ಕಾರಣವನ್ನು ದೈಹಿಕವಾಗಿ ಕಂಡುಹಿಡಿಯಲಾಗದಂತೆ ಇರುವುದು.

ನೋವು ಮತ್ತಿನ್ನಿತರ ಸಮಸ್ಯೆಗಳನ್ನು ಎದುರಿಸುವುದು ನಿಜವಾಗಿಯೇ ಇರುವುದು. ಈ ಲಕ್ಷಣಗಳು ದೈನಂದಿನ ಚಟುವಟಿಕೆಗಳ ಮೇಲೆ ಮಹತ್ವದ ಪರಿಣಾಮವನ್ನು ಬೀರುವುದು.

ಈ ರೀತಿಯ ನೋವಿನ ಸಮಸ್ಯೆಯಿರುವ ವ್ಯಕ್ತಿಗಳು ಸತತವಾಗಿ ಚಿಕಿತ್ಸೆಯ ಮೊರೆ ಹೋಗುತ್ತಾರೆ. ಅವರು ಸಾಮಾಜಿಕವಾಗಿ ಪ್ರತ್ಯೇಕಿಸಿಕೊಳ್ಳುತ್ತಾರೆ ಮತ್ತು ಅವರು ತಮ್ಮ ಉದ್ಯೋಗದಲ್ಲಿ, ಕುಟುಂಬದೊಡನೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಾರೆ.

ಅಗೋಚರ (ಸೋಮ್ಯಾಟೋಫಾರ್ಮ್) ದೈಹಿಕ ನೋವಿನ ಸಮಸ್ಯೆ ಗೆ ಕಾರಣಗಳೇನು?

ಅಗೋಚರ (ಸೋಮ್ಯಾಟೋಫಾರ್ಮ್) ದೈಹಿಕ ನೋವಿನ ಸಮಸ್ಯೆಗೆ ವಿವಿಧ ಕಾರಣಗಳೆಂದು ತಿಳಿಯಲಾಗಿದೆ. ಜೈವಿಕ, ಮಾನಸಿಕ ಅಥವಾ ಸಾಮಾಜಿಕ – ಸಾಂಸ್ಕೃತಿಕ ಕಾರಣಗಳಾಗಿರಬಹುದು

ಜೈವಿಕ ಅಂಶಗಳು: ಅನುವಂಶಿಕತೆ – ಅನುವಂಶಿಕವಾಗಿ ಈ ನೋವಿನ ಸಮಸ್ಯೆಯ ಲಕ್ಷಣಗಳು ಮುಂದುವರೆಯುವ ಸಾಧ್ಯತೆಗಳಿವೆ ಎಂದು ಪ್ರಯೋಗಗಳು ಸಾಬೀತು ಪಡಿಸಿವೆ.

ಮಾನಸಿಕವಾಗಿ ತೀವ್ರ ಒತ್ತಡ ಮತ್ತು ಭಾವನಾತ್ಮಕವಾಗಿ ಯಾತನೆ ಅನುಭವಿಸುವುದು ಕಾರಣಗಳಾಗುತ್ತದೆ.

ಮಾನಸಿಕ ಒತ್ತಡವು ರೋಗ ನಿರೋಧಕ ಪ್ರತಿಕ್ರಿಯೆಯ ಮೇಲೆ ಪರಿಣಾಮ ಬೀರುವುದು, ಮತ್ತದು ಜಠರ-ಕರುಳಿನ ಪ್ರತಿಕ್ರಿಯೆಗಳನ್ನು ಪ್ರಚೋದಿಸುತ್ತದೆ. ಭಾವನಾತ್ಮಕ ಯಾತನೆಗಳು ಮಾಂಸಖಂಡಗಳನ್ನು ಅತೀವ ಸೆಳೆತಕ್ಕೀಡು ಮಾಡುವುದರಿಂದ ಮಾಂಸಖಂಡಗಳಲ್ಲಿ ನೋವು ಮತ್ತು ತಲೆ ನೋವುಗಳನ್ನುಂಟು ಮಾಡುವುದು.

ಸಾಮಾಜಿಕ – ಸಾಂಸ್ಕೃತಿಕ ಅಂಶಗಳು – ಸಾಂಪ್ರದಾಯಿಕವಾಗಿ ಅಥವಾ ಸಾಮಾಜಿಕವಾಗಿ ಕುಟುಂಬಗಳಲ್ಲಿ ಮಾನಸಿಕ ಸಮಸ್ಯೆಗಳನ್ನು ತೋರ್ಪಡಿಸಲು ಕಳಂಕಿತರಾಗುವ ಸಂಭವವಿರುವಾಗ ವ್ಯಕ್ತಿಯು ತನ್ನ ಯಾತನೆಯನ್ನು ದೈಹಿಕ ನೋವಿನ ಮೂಲಕ ತೋರ್ಪಡಿಸಬಹುದು.

ಲಕ್ಷಣಗಳು:

ಮುಖ್ಯವಾದ ಲಕ್ಷಣವೆಂದರೆ ದೇಹದ ಯಾವುದೇ ಭಾಗದಲ್ಲಿ ಬಿಟ್ಟುಹೋಗದ ಮತ್ತು ಅತೀವವಾದ ನೋವು ಆರು ತಿಂಗಳಿಗಿಂತ ಜಾಸ್ತಿ ಸಮಯದವರೆಗೆ ಕಾಡುತ್ತಾ ವ್ಯಕ್ತಿಯ ಕಾರ್ಯ ಸಾಧನೆ, ಸಂಬಂಧಗಳು ಮತ್ತಿನ್ನಿತರ ಚಟುವಟಿಕೆಗಳ ಮೇಲೆ ಪರಿಣಾಮ ಬೀರುವುದು.

ಅಗೋಚರ (ಸೋಮ್ಯಾಟೋಫಾರ್ಮ್) ದೈಹಿಕ ನೋವಿನ ಸಮಸ್ಯೆಯ ನಿವಾರಣೆ ಹೇಗೆ?

ನೋವಿನ ಸಮಸ್ಯೆಯನ್ನು ಸೂಕ್ತವಾದ ಔಷಧ ಮತ್ತು ಮಾನಸಿಕೆ ಚಿಕಿತ್ಸೆಗಳ ಮೂಲಕ ನಿವಾರಿಸಬಹುದು. ಅರಿವು ಮತ್ತು ವರ್ತನೆಗಳ ಚಿಕಿತ್ಸೆಯು(ಸಿಬಿಟಿ) ಈ ನೋವಿನ ಸಮಸ್ಯೆಗೆ ಪರಿಣಾಮಕಾರಿ ಚಿಕಿತ್ಸೆಯಾಗಿದೆ. ಸಿಬಿಟಿ ಯು ವ್ಯಕ್ತಿಗೆ ತನ್ನ ನೋವಿನ ಮೂಲ ಕಾರಣವನ್ನು ತಿಳಿಯಲು ಅನುಕೂಲ ಮಾಡಿಕೊಡುತ್ತದೆ, ಜೊತೆಗೆ ದೇಹದಲ್ಲಿ ನೋವಿನ ಸಂವೇದನೆಯನ್ನು ನಿಭಾಯಿಸಲು ಪರಿಣಾಮಕಾರಿಯಾದ ಮಾರ್ಗಗಳನ್ನು ಬೆಳೆಸಿಕೊಳ್ಳುವಂತೆ ಮಾಡುತ್ತದೆ.