Skip to content

ಒತ್ತಡ

ಒತ್ತಡ ಎಂದರೇನು?

ಒತ್ತಡವೆನ್ನುವುದು ಸರ್ವೇindex ಸಾಮಾನ್ಯವಾದ ಜೀವನದ ಒಂದು ಅಂಗ. ಕಡಿಮೆ ಪ್ರಮಾಣದ ಒತ್ತಡವು ನಿಜಕ್ಕೂ ಒಳ್ಳೆಯದೇ ಆಗಿದೆ, ಅದು ನಮಗೆ ಸ್ಪೂರ್ತಿಯನ್ನು ನೀಡಿ ನಮ್ಮ ಕ್ರಿಯಾಶೀಲತೆಯನ್ನು ಹೆಚ್ಚಿಸುತ್ತದೆ. ಆದರೆ ಅಧಿಕ ಒತ್ತಡ ಮತ್ತು ಒತ್ತಡಯುತ ಪ್ರತಿಕ್ರಿಯೆಗಳು ಹಾನಿಕಾರಕವಾಗುವುದು.

ಒತ್ತಡವೆನ್ನುವುದು ನಮ್ಮ ಮೇಲೆ ಹೇರಿದ ಬಯಕೆ/ಆಕಾಂಕ್ಷೆಗಳಿಗೆ ಮಾಡುವ ನಮ್ಮ ಒಂದು ಪ್ರತಿಕ್ರಿಯೆ. ಬಾಹ್ಯ ಜಗತ್ತಿನಿಂದ ಓರ್ವ ವ್ಯಕ್ತಿಯ ಮೇಲೆ ಹೇರಲ್ಪಡುವ ಅತೀವ ಒತ್ತಾಯದಿಂದ ಅವನಲ್ಲಿ ಉಂಟಾಗುವ ದೈಹಿಕ ಮತ್ತು ಮಾನಸಿಕ ದಣಿವೇ ಒತ್ತಡ. ಕೆಲಸ ಸಾಧಿಸಲು ಬೇಕಾದ ಸಾಮರ್ಥ್ಯಕ್ಕಿಂತ ಅಧಿಕವಾದ ಬೇಡಿಕೆ ಹೇರಿದಲ್ಲಿ ಒತ್ತಡವು ಉಂಟಾಗುತ್ತದೆ.

ಒತ್ತಡ ಉಂಟಾಗಲು ಕಾರಣಗಳೇನು?

ಪ್ರತಿಯೊಬ್ಬ ವ್ಯಕ್ತಿಯೂ ಬೇರೆ ಬೇರೆ ರೀತಿಯಲ್ಲಿ ಒತ್ತಡದ ಸನ್ನಿವೇಶದಲ್ಲಿ ಪ್ರತಿಕ್ರಿಯಿಸುತ್ತಾರೆ. ಯಾವುದೇ ವಿಚಾರಗಳೂ ಕೂಡ ಒತ್ತಡಕ್ಕೆ ಕಾರಣವಾಗಬಹುದು, ಅದಕ್ಕೆ ಬೇರೆ ಬೇರೆ ರೀತಿಯ ಪ್ರಚೋದನೆಗಳು ಇರುವುದು. ಕೆಲವು ಸಾಮಾನ್ಯ ಕಾರಣಗಳು:

  • ವಿಯೋಗದಿಂದಾಗುವ ಖಾಲಿತನ
  • ಕೌಟುಂಬಿಕ ಸಮಸ್ಯೆಗಳು
  • ಆರ್ಥಿಕ ಸಮಸ್ಯೆಗಳು
  • ಅನಾರೋಗ್ಯ
  • ಸಮಯದ ಕೊರತೆ
  • ಸಂಬಂಧಗಳಲ್ಲಿನ ಸಂಕೀರ್ಣ ಸಮಸ್ಯೆಗಳು

ಲಕ್ಷಣಗಳು:

ದೈಹಿಕ ಲಕ್ಷಣಗಳು ಭಾವನಾತ್ಮಕ ಲಕ್ಷಣಗಳು ವರ್ತನೆಗಳಲ್ಲಿನ ಲಕ್ಷಣಗಳು
  • ಆಯಾಸ
  • ನಿದ್ರೆಗೆ ತೊಂದರೆಗಳು
  • ತೀವ್ರವಾಗಿ ಬೆವರುವುದು
  • ಉಸಿರು ಕಟ್ಟಿದಂತಾಗುವುದು.
  • ನೋವುಗಳು ಮತ್ತು ಬಾಧೆಗಳು
  • ಮೂರ್ಛೆ ಹೋಗುವುದು.
  • ಅಜೀರ್ಣ
  • ಅನಿಯಮಿತ ಎದೆ ಬಡಿತ
  • ಒಣಗಿದ ಬಾಯಿ
  • ಅಸಮಧಾನ
  • ಅಸಹನೆ/ಕಿರಿ-ಕಿರಿ (ರಗಳೆ)
  • ಏಕಾಂಗಿತನದ ಅಥವಾ ಎಲ್ಲರಿಂದ ತ್ಯಕ್ತರಾದ ಅನುಭವ.
  • ತಳಮಳ
  • ದುಃಖಯುತ ಭಾವನೆಗಳು
  • ಅಪರಾಧಿತನದ ಮತ್ತು ಸಿಟ್ಟಿನ ಅನುಭವಗಳು
  • ಗೊಂದಲಗಳು
  • ಹಸಿವಿನಲ್ಲಿ ಬದಲಾವಣೆ.
  • ಮದ್ಯ ಮತ್ತು ಮಾದಕ ವಸ್ತುಗಳ ಅತೀವ ಸೇವನೆ
  • ಅತೀವ ಧೂಮಪಾನ
  • ಅವಿಶ್ರಾಂತತೆ
  • ಉಗುರು ಕಚ್ಚುವುದು.
  • ಸಮಯವನ್ನು ಹೊಂದಿಸಲು ಅಶಕ್ತರಾಗುವುದು.
  • ಸತತವಾಗಿ ಅಳುವುದು.

 

ಒತ್ತಡದ ಸನ್ನಿವೇಶಗಳನ್ನು ನಿಭಾಯಿಸುವ ಮಾರ್ಗಗಳು:

  • ಆರೋಗ್ಯವರ್ಧಿಸುವ ಮತ್ತು ಸಮತೋಲನದ ಆಹಾರ ಸೇವನೆ.
  • ಉತ್ತಮವಾಗಿ ನಿದ್ದೆಯನ್ನು ಮಾಡುವುದು.
  • ವ್ಯಾಯಾಮ: ದೈಹಿಕವಾಗಿ ಚಟುವಟಿಕೆಯಿಂದ ಕೂಡಿರುವವರ ಮಾನಸಿಕ ಮತ್ತು ಶಾರೀರಿಕ ಸ್ಥಿತಿಗಳಲ್ಲಿ ಧನಾತ್ಮಕ ಬದಲಾವಣೆಗಳಾಗುವುದೆಂದು ಸಾಧಿಸಲಾಗಿದೆ.
  • ಉತ್ತಮವಾಗಿ ಧನಾತ್ಮಕವಾಗಿ ಯೋಚಿಸಿ – ನಿಮ್ಮೊಂದಿಗೆ ಧನಾತ್ಮಕವಾಗಿ ಮಾತನಾಡಿಕೊಳ್ಳಿ.
  • ಪ್ರತಿದಿನ ನಿಮ್ಮ ಆಸಕ್ತಿ ಮತ್ತು ಹವ್ಯಾಸಗಳಿಗೆ ಹಾಗು ವಿಶ್ರಾಂತಿ ಪಡೆಯಲು ಸ್ವಲ್ಪ ಸಮಯವನ್ನು ಮೀಸಲಿಡಿ.
  • ಕಾಫೀನ್, ಮದ್ಯ, ಮಾದಕವಸ್ತುಗಳ ಸೇವನೆಯನ್ನು ಕಡಿಮೆಗೊಳಿಸಿ.
  • ಉಸಿರಾಟದ ವ್ಯಾಯಾಮ (ಪ್ರಾಣಾಯಾಮ) ಮತ್ತು ವಿಶ್ರಾಂತಿಯ ವಿಧಾನಗಳು ಒತ್ತಡಡ ಸಮಯದಲ್ಲಿ ಬಹಳ  ಉಪಯೋಗಕಾರಿಯಾಗುವುದು.