-
1.ಸಾಮಾನ್ಯ ಮಾಹಿತಿ
admin
30-04-2014
ಕೌನ್ಸೆಲಿಂಗ್ ಅನ್ನುವುದು ನಿಮ್ಮ ಮಾನಸಿಕ ಯಾತನೆ ಅಥವಾ ಸಮಸ್ಯೆಗಳನ್ನು ನಿಭಾಯಿಸಲು ನುರಿತ ತಜ್ಞರು ನಡೆಸುವ ಸಂವಾದ. ಇದು ಮಾನಸಿಕ ಆರೋಗ್ಯ ಮತ್ತು ಮಾನಸಿಕ ಅಥವಾ ಮಾನವ ಅಭಿವೃದ್ಧಿ ತತ್ವಗಳನ್ನು ಅರಿವು, ಭಾವನೆಗಳು, ವರ್ತನೆಗಳು ಅಥವಾ ವ್ಯವಸ್ಥಿತ ರೀತಿಯಲ್ಲಿ ಅಳವಡಿಸಿಕೊಳ್ಳುವುದು ಆಗಿದೆ. ಆ ಮೂಲಕ ನಿಮ್ಮ ಒಳ್ಳೆಯದಾಗುವಿಕೆ, ವೈಯಕ್ತಿಕ ಬೆಳವಣಿಗೆ, ವೃತ್ತಿಯಲ್ಲಿ ಮುನ್ನಡೆ ಇತ್ಯಾದಿಗಳನ್ನು ನಿಭಾಯಿಸುವುದರ ಬಗ್ಗೆ ಉತ್ತರ ಕಂಡುಕೊಳ್ಳಬಹುದು. ಜೊತೆಗೆ ಇದು ರೋಗ ಲಕ್ಷಣಗಳ ಅಧ್ಯಯನವನ್ನೂ ಒಳಗೊಂಡಿದೆ.
Was this helpful?0
0
Hits: 28admin
30-04-2014
ಕೌನ್ಸೆಲಿಂಗ್ ನಿಮ್ಮ ಬಗ್ಗೆ ನಿಮಗೆ ಅರಿವಾಗಲು ಮತ್ತು ನಿಮ್ಮನ್ನು ನೀವು ಅಧ್ಯಯನ ಮಾಡಿಕೊಳ್ಳಲು ಸಹಾಯವಾಗುತ್ತದೆ. ಇದರಿಂದ ನೀವು ಏನು ಅರಿಯುವಿರೋ ಅವುಗಳನ್ನು ನಿಮ್ಮ ಜೀವನದಲ್ಲಿ ನಿಜವಾದ ಮತ್ತು ಮಹತ್ವವಾದ ಬದಲಾವಣೆಯನ್ನು ತರಲು ಉಪಯುಕ್ತವಾಗುವುದರ ಜೊತೆಗೆ ನಿಮ್ಮ ಈಗಿನ ಮಾನಸಿಕ ಸಮಸ್ಯೆಗಳನ್ನು ನಿಭಾಯಿಸಲು ಶಕ್ಯವಾಗುವುದು.
Was this helpful?0
0
Hits: 19admin
30-04-2014
ವ್ಯಕ್ತಿ ಮತ್ತು ನುರಿತ ತಜ್ಞರ ಸಂವಾದವನ್ನು ಮಿಂಚಂಚೆ (ಇಮೈಲ್), ಚಾಟ್, ವೀಡಿಯೊ ಕಾನ್ಫರೆನ್ಸಿಂಗ್ ಇವೆ ಮೊದಲಾದ ಇಂಟರ್ನೆಟ್ ತಂತ್ರಜ್ಞಾನಗಳ ಮೂಲಕ ನಡೆಸುವುದೇ ಇಂಟರ್ನೆಟ್ ಕೌನ್ಸೆಲಿಂಗ್.
Was this helpful?0
0
Hits: 18admin
30-04-2014
ಹಲವಾರು ಸಂಶೋಧನೆಗಳು ಇಂಟರ್ನೆಟ್ ಕೌನ್ಸೆಲಿಂಗ್ ಕೂಡ ಮುಖತಃ ಕೌನ್ಸೆಲಿಂಗ್ ನಷ್ಟೇ ಪರಿಣಾಮಕಾರಿಯಾಗಿರುವುದು ಎಂದು ತೋರಿಸಿವೆ.
Was this helpful?0
0
Hits: 12admin
30-04-2014
ಮಾನಸಿಕವಾಗಿ/ಭಾವನಾತ್ಮಕವಾಗಿ ತೊಂದರೆಗೊಳಗಾದ ವ್ಯಕ್ತಿಗಳಿಗೆ ಸಹಾಯ ಮಾಡುವ ಮತ್ತು ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ನಿಭಾಯಿಸಲು ಸಹಾಯ ಮಾಡುವ ನುರಿತ ತಜ್ನರೇ ಚಿಕಿತ್ಸಕರು.
Was this helpful?0
0
Hits: 16admin
30-04-2014
ಜೈವಿಕ ಅಂಶಗಳು ಮಾನಸಿಕ ಸಮಸ್ಯೆಗಳನ್ನು ಉಂಟುಮಾಡಲು ಬಹಳ ಪ್ರಮುಖವಾಗಿದೆ. ಒಂದು ಪ್ರಕಾರದ ಸಮಸ್ಯೆಯ ಜೈವಿಕ ಅಂಶಗಳನ್ನು ಹೊಂದಿರುವ ವ್ಯಕ್ತಿಯ ಮೇಲೆ ಅವುಗಳು ಪರಿಣಾಮ ಬೀರಬಹುದು ಅಥವಾ ಬೀರದೆ ಇರಬಹುದು. ಇದು ಮಾನಸಿಕ ಮತ್ತು ಸಾಮಾಜಿಕ ಅಂಶಗಳನ್ನೂ ಕೂಡ ಅವಲಂಬಿಸಿದೆ,
Was this helpful?0
0
Hits: 15admin
30-04-2014
ಇಲ್ಲ. ಮಾನಸಿಕ ಅಸ್ವಾಸ್ಥ್ಯತೆಯು ಯಾವುದೇ ರೀತಿಯಲ್ಲಿ ಮಂತ್ರಗಾರಿಕೆ ಮತ್ತು ತಪ್ಪು ಮಾಡಿದ್ದಕ್ಕೆ ಸಂಬಂಧಿಸಿರುವುದಿಲ್ಲ. ಅದು ಯಾರಲ್ಲಿ ಬೇಕಾದರೂ ಪರಿಣಾಮ ಬೀರಬಹುದು.
Was this helpful?0
0
Hits: 14admin
30-04-2014
ಮಾನಸಿಕ ಅಸ್ವಾಸ್ಥ್ಯತೆ ಯಾವುದೇ ವಯಸ್ಸು, ಲಿಂಗ, ಸಾಮಾಜಿಕ ಅರ್ಥಿಕ ಪರಿಸ್ಥಿತಿ ದವರಲ್ಲಿಯೂ ಪರಿಣಾಮ ಬೀರಬಹುದು. ಮಾನಸಿಕ ಅಸ್ವಾಸ್ಥ್ಯತೆಗೂ ಬುದ್ಧಿವಂತಿಕೆಗೂ ಯಾವುದೇ ಸಂಬಂಧವಿಲ್ಲ.
Was this helpful?0
0
Hits: 12admin
30-04-2014
ಇಲ್ಲ. ಮಾನಸಿಕ ಅಸ್ವಾಸ್ಥ್ಯತೆಯು ವ್ಯಕ್ತಿಯ ದೈನಂದಿನ ಜೀವನದಲ್ಲಿ ವಿದ್ಯಾಭ್ಯಾಸದಲ್ಲಿ, ಉದ್ಯೋಗದಲ್ಲಿ, ಸಂಸಾರದಲ್ಲಿ, ಸಮಾಜದಲ್ಲಿ ವ್ಯಕ್ತಿಯ ಮೇಲೆ ಬಹಳ ಪರಿಣಾಮ ಬೀರುವುದರಿಂದ ಸೂಕ್ತವಾದ ಚಿಕಿತ್ಸೆಯು ಅತ್ಯವಶ್ಯಕ.
Was this helpful?0
0
Hits: 12admin
30-04-2014
ಇಲ್ಲ. ಮಾನಸಿಕ ಅಸ್ವಾಸ್ಥ್ಯತೆ ಹೊಂದಿರುವ ವ್ಯಕ್ತಿಗಳು ಅಪಯಕಾರಿಗಳಲ್ಲ. ಅವರು ಸಮಾಜದಲ್ಲಿರುವವರಂತೆಯೇ ಆಗಿರುತ್ತಾರೆ.
Was this helpful?0
0
Hits: 16admin
30-04-2014
ಸೂಕ್ತವಾದ ಮಾನಸಿಕ ಚಿಕಿತ್ಸೆ, ಔಷಧಿಗಳು ಲಭ್ಯವಿರುವುದರಿಂದ ಮಾನಸಿಕ ಅಸ್ವಾಸ್ಥ್ಯತೆಯನ್ನು ನಿವಾರಿಸಬಹುದು. ಹಾಗಾಗಿ ಮಾನಸಿಕ ಅಸ್ವಾಸ್ಥ್ಯತೆಯಿಂದ ಬಳಲುವವರು ಉದ್ಯೋಗಕ್ಕೆ ಹೋಗಬಹುದು ಮತ್ತು ಸಾಮಾನ್ಯ ಜೀವನ ನಡೆಸಬಹುದು.
Was this helpful?0
0
Hits: 15admin
01-05-2014
ಇಲ್ಲ. ಮಾನಸಿಕ ಅಸ್ವಾಸ್ಥ್ಯತೆ ಹೊಂದಿರುವ ವ್ಯಕ್ತಿಗಳಿಗೆ ಸೂಕ್ತ ಆಹಾರ ಮತ್ತು ಶಾರೀರಿಕ ವ್ಯಾಯಾಮದ ಅಗತ್ಯ ಕೂಡ ಇರುತ್ತದೆ. ಶಾರೀರಿಕ ವ್ಯಾಯಾಮವು ಕೇವಲ ದೇಹವನ್ನು ಸದೃಢವಾಗಿ ಇದುವುದಲ್ಲದೆ, ಧನಾತ್ಮಕ ಯೋಚನೆಗಳನ್ನು ಹೊಂದುವಂತೆ ಮಾಡುತ್ತದೆ.
Was this helpful?0
0
Hits: 12admin
01-05-2014
ಇಲ್ಲ. ಮದುವೆಯು ಯಾವುದೇ ರೀತಿಯಲ್ಲಿ ಮಾನಸಿಕ ಅಸ್ವಸ್ಥರಿಗೆ ಉಪಯುಕ್ತವಾಗುವುದಿಲ್ಲ. ಕೆಲವೊಮ್ಮೆ ಸಮಸ್ಯೆಯನ್ನು ಇನ್ನು ಹದಗೆಡಿಸಬಹುದು. ಮದುವೆಯು ವಿವಿಧ ಒತ್ತಡಗಳನ್ನು ನೀಡುವುದರಿಂದ, ಮದುವೆಯು ಮಾನಸಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರಬಹುದು ಎನ್ನಲು ಪುರಾವೆಗಳಿವೆ.
Was this helpful?0
0
Hits: 16admin
01-05-2014
ಹೌದು. ವ್ಯಕ್ತಿಯ ಮಾನಸಿಕ ಅಸ್ವಾಸ್ಥ್ಯತೆಯು ಲೈಂಗಿಕ ಚಟುವಟಿಕೆಗಳ ಮೇಲೆ ಪ್ರಭಾವ ಬೀರುವುದು. ವ್ಯಕ್ತಿಯು ಲೈಂಗಿಕ ಪ್ರಕ್ರಿಯೆಗಳಲ್ಲಿ ಆಸಕ್ತಿಯನ್ನು ಕಳೆದುಕೊಳ್ಳಬಹುದು (ಖಿನ್ನತೆಯ ಸಂದರ್ಭಗಳಲ್ಲಿ) ಅಥವಾ ಅತೀವ ಲೈಂಗಿಕ ಆಸಕ್ತಿಯನ್ನು ಬೆಳಸಿಕೊಳ್ಳಬಹುದು (ಮತಿ ಭ್ರಮಣದಲ್ಲಿ) ಮತ್ತಿವು ಅಪಾಯಕಾರಿ ವರ್ತನೆಗಳನ್ನು ಪ್ರೇರೇಪಿಸಬಹುದು.
Was this helpful?0
0
Hits: 12admin
01-05-2014
ಮಾನಸಿಕ ಅಸ್ವಸ್ಥ್ಯತೆಯನ್ನು ಗುಣಪಡಿಸಬಹುದು. ಆದರೆ ಗುಣಮುಖರಾಗುವುದು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿ ಇರುವುದು ಮತ್ತು ಅದು ಮಾನಸಿಕ ಸಾಮಾಜಿಕ ಅಂಶಗಳಿಂದ ಕೂಡ ಪ್ರಭಾವಿತವಾಗಿರುತ್ತದೆ. ಕುಟುಂಬ ಮತ್ತು ಚಿಕಿತ್ಸಾ ತಂಡದ ಸೂಕ್ತ ಬೆಂಬಲಗಳಿಂದ ವ್ಯಕ್ತಿಯು ಬೇಗ ಗುಣಮುಖನಾಗಲು ಸಾಧ್ಯ. ಬೆಂಬಲವಿಲ್ಲದಿರುವ ವ್ಯಕ್ತಿಯು ತಡವಾಗಿ ಗುಣಮುಖನಾಗುವನು.
Was this helpful?0
0
Hits: 15admin
30-04-2014
ಖಿನ್ನತೆ ಎನ್ನುವುದು ವ್ಯಕ್ತಿಯ ಮನಸ್ಥಿತಿಯ ಪ್ರಭಾವ ಬಿರುವ ಸಾಮಾನ್ಯವಾಗಿ ಕಂಡು ಬರುವ ಮಾನಸಿಕ ಅಸಮತೊಲನವಾಗಿದೆ. ಬೇಸರವಾಗುವುದು, ಯಾವುದೇ ಚಟುವಟಿಕೆಗಳಲ್ಲಿ ಆಸಕ್ತಿಯಿರದಿರುವುದು, ಋಣಾತ್ಮಕ ಯೋಚನೆಗಳು, ಉತ್ಸಾಹದ ಕಡಿಮೆಯಾಗುವಿಕೆ ಇವುಗಳು ಖಿನ್ನತೆಯ ಲಕ್ಷಣಗಳು. ಈ ಲಕ್ಷಣಗಳು ಎರಡು ವಾರ ಅಥವಾ ಅದಕ್ಕಿಂತ ಜಾಸ್ತಿ ಸಮಯ ಇದ್ದಲ್ಲಿ ಇದಕ್ಕೆ ಸೂಕ್ತ ಚಿಕಿತ್ಸೆಯನ್ನು ಮಾಡಬೇಕು.
Was this helpful?0
1
Hits: 29admin
30-04-2014
ಒತ್ತಡಕ್ಕೆ ಸ್ವಾಭಾವಿಕವಾದ ಪ್ರತಿಕ್ರಿಯೆಯೇ ಆತಂಕ. ಇದರಿಂದ ಒಬ್ಬ ವ್ಯಕ್ತಿಯು ಚಿಂತೆಯನ್ನು ಅನುಭವಿಸುವುದು, ಪ್ರತಿನಿತ್ಯದ ಘಟನೆಗಳಿಗೆ ಆತಂಕ ವ್ಯಕ್ತಪಡಿಸುವುದು ಹಾಗು ಈ ಸಮಸ್ಯೆಯು ಕನಿಷ್ಠ ಆರು ತಿಂಗಳು ತೊಂದರೆ ಕೊಟ್ಟು ಕಾರ್ಯ ನಿರ್ವಹಿಸಲು ಆಗದಂತೆ ಮಾಡುವುದು ಇದು ಗಮನಿಸಬಹುದಾದ ಸಮಸ್ಯೆಯೆಂದು ಪರಿಗಣಿಸಬೇಕು.
Was this helpful?0
0
Hits: 19admin
30-04-2014
ಅಗೋಚರ ದೈಹಿಕ ನೋವಿನ ಸಮಸ್ಯೆಯ ಮುಖ್ಯ ಲಕ್ಷಣವೆಂದರೆ ರೋಗಿಯು ಶಾರೀರಕವಾಗಿ ವಿವರಿಸಲಾಗದ ಅತೀವ ಬಾಧೆಕೊಡುವ ನೋವನ್ನು ಅನುಭವಿಸುತ್ತಿರುವುದು.
Was this helpful?0
0
Hits: 14admin
30-04-2014
ಮಾನಸಿಕ ಸಮಸ್ಯೆಗಳನ್ನು ಔಷಧಿಗಳಿಂದ, ಕೌನ್ಸೆಲಿಂಗ್ ನಿಂದ ಮತ್ತು ಮಾನಸಿಕ ಮಧ್ಯಂತರ ತಡೆಯೊಡ್ಡುವ ವಿಧಾನಗಳಿಂದ ಚಿಕಿತ್ಸೆ ಮಾಡಬಹುದು.
Was this helpful?0
0
Hits: 18admin
30-04-2014
ಸಮಸ್ಯೆಯ ಗಂಭೀರತೆ ಮತ್ತು ಗಹನತೆಯ ಮೇಲೆ ಇದು ಅವಲಂಬಿತವಾಗಿದೆ. ಸಮಸ್ಯೆಯು ಕಡಿಮೆ ಮಟ್ಟದ್ದಾಗಿದ್ದಲ್ಲಿ ಕೌನ್ಸೆಲಿಂಗ್ ಮತ್ತು ಮಾನಸಿಕ ಮಧ್ಯಂತರ ತಡೆಯೊಡ್ಡುವಿಕೆಯಿಂದ ಪರಿಹರಿಸಬಹುದು. ಆದರೆ ಸಮಸ್ಯೆಯು ಗಂಭೀರ ಸ್ವರೂಪದ್ದು ಮತ್ತು ಬಹಳ ಆಳವಾಗಿದ್ದು ನಿಮ್ಮ ದೈನಂದಿನ ಚಟುವಟಿಕೆಗಳಾದ ಆಹಾರ ಸೇವನೆ, ನಿದ್ರೆ, ನಿಮ್ಮ ಉದ್ಯೋಗ, ಲೈಂಗಿಕ ಕ್ರಿಯೆಗಳ ಮೇಲೆ ಪ್ರಭಾವ ಬೀರುತ್ತಿದ್ದಲ್ಲಿ ಔಷಧಿಯು ಇವುಗಳನ್ನು ಪರಿಹರಿಸಲು ಅಗತ್ಯವಿರುವುದು. ಔಷಧಿಗಳೊಂದಿಗೆ ಮಾನಸಿಕ ಚಿಕಿತ್ಸೆಗಳು ಸೇರಿಕೊಂಡು ಬಹಳ ಪರಿಣಾಮಕಾರಿಯಾಗಿ ಸಮಸ್ಯೆಗಳನ್ನು ಪರಿಹರಿಸಬಹುದು.
Was this helpful?0
0
Hits: 14admin
01-05-2014
ಲಾಗಿನ್ ಆಗಿರಿ.
ವಿವಿಧ ಲೇಖನಗಳ ವರ್ಗಗಳನ್ನು(ಕೆಟಗರಿ) ನೋಡಿ.
ಲೇಖನಗಳನ್ನು ಓದಿ.
Was this helpful?0
0
Hits: 15admin
01-05-2014
ನೀವು ಎಷ್ಟು ಬೇಕಾದರೂ ಇಮೇಲ್ ಕಳಿಸಬಹುದು.
Was this helpful?0
0
Hits: 13admin
01-05-2014
ನಿಮ್ಮ ಪ್ರಶ್ನೆಯನ್ನು 24 ಗಂಟೆಗಳೊಳಗೆ ಉತ್ತರಿಸಲಾಗುವುದು.
Was this helpful?0
0
Hits: 13admin
01-05-2014
ಇಲ್ಲ. ನಿಮ್ಮ ವೈಯಕ್ತಿಕ ಮಾಹಿತಿಗಳನ್ನು ನಿಮ್ಮನ್ನು ಗುರುತಿಸಲು ಮತ್ತು ನಿಮ್ಮ ಪ್ರವೇಶ ಪದ (ಯುಸರ್ ನೇಮ್) ಗಳಿಗೋಸ್ಕರ ಮಾತ್ರ ಉಪಯೋಗಿಸಲಾಗುವುದು.
Was this helpful?0
0
Hits: 13admin
01-05-2014
ಇಲ್ಲ. ಇಂಟರ್ನೆಟ್ ಸಂಪರ್ಕದಿಂದ ಈ ಸವಲತ್ತುಗಳನ್ನು ಉಪಯೋಗಿಸಬಹುದು.
Was this helpful?1
0
Hits: 12admin
01-05-2014
ನೀವು ಹಂಚಿಕೊಂಡ ಮಾಹಿತಿಗಳು ಕಡ್ಡಾಯವಾಗಿ ಗೌಪ್ಯವಾಗಿ ಇಡಲಾಗುವುದು.
Was this helpful?0
0
Hits: 14
ಸಾಮಾನ್ಯವಾಗಿ ಕೇಳುವ ಪ್ರಶ್ನೆಗಳು
2.ಮಿಥ್ಯೆಗಳು
3.ಮಾನಸಿಕ ಸಮಸ್ಯೆಗಳು
4.ವೆಬ್ ಸೈಟ್ ಬಗ್ಗೆ